01 November 2020

ಕನ್ನಡ ರಾಜ್ಯೋತ್ಸವ-- ರತ್ನನ್ ಪ್ರಪ್ಂಚ, ಇತ್ಯಾದಿ--1



ಪ್ರೀತಿಯ ಓದುಗರಿಗೆ

ಕನ್ನಡ ರಾಜ್ಯೋತ್ಸವದ ಶುಭಾಷಯಗಳು. 

              ನಾವು ಕನ್ನಡದವರದ್ದು ಒಂದು ವಿಚಿತ್ರ ಸ್ವಭಾವ - ಈ ದಿನ ಮಾತ್ರವಲ್ಲ, ಈ ತಿಂಗಳು ಪೂರ್ತಿ ಆದದ್ದಾಗಲಿ, ಶತಾಯ-ಗತಾಯ ಕನ್ನಡಾಭಿಮಾನ ತೋರಿಸಿಯೇ ಶತಸಿದ್ದ. ಹಾಗಂತ ಬೇರೆಯ ದಿನಗಳಲ್ಲಿ ಭಾಷಾಭಿಮಾನಕ್ಕೆ ಕೊರತೆಯೆಂತು ಇಲ್ಲ; ಆದರೆ, ಢಾಳಾಗಿ ಭಾಷಾಭಿಮಾನವನ್ನು ಹಾಕಿ ತೋರಿಸುತ್ತೇವೆಯೆಂತಲೂ ಇಲ್ಲ. ಈಗಿನ "ಕನ್ನಡ್ ಗೊತ್ತಿಲ್ಲ" ಸಮಯದಲ್ಲಿ ಒಂದ್ ಸ್ವೊಲ್ಪ ಜೋರಾಗಿ "ಕನ್ನಡ ಕಲಿಯಿರಿ" ಎನ್ನುವಷ್ಟರ ಮಟ್ತಿಗೆ ಬದಲಾಗಿದ್ದೇವೆ, ಅಲ್ವೇನ್ರಿ?

           ಹಾಗಾಗಿ ,ಈ ಸಲ ಕನ್ನಡದಲ್ಲೇ ಬರಯಬೇಕೆಂಬ ಹುಮ್ಮಸ್ಸು. ಆಂಗ್ಲ ಭಾಷೆ ನನ್ನ ವೃತ್ತಿಪರ ಭಾಷೆಯಷ್ಟೇ ಅಲ್ಲ; ಕನ್ನಡದಂತೆಯೇ ಇಂಗ್ಲೀಷ್ ಕೂಡ ನನ್ನ ಸೃಜನಶೀಲ ಬರವಣಿಗೆಯ ಭಾಷೆ.  ಆದರೆ, ನನ್ನ ಕನಸಿನ ಭಾಷೆ ಮಾತ್ರ ಕನ್ನಡ. ಈ ಸಕಾರಣದಿಂದಣದಿಂದ ಹಾಗೂ ಸಹಜವಾಗಿ  ಬ್ಲಾಗ್ ದ್ವಿ-ಭಾಷೆಯದ್ದು.  ಕನ್ನಡ ಹಾಗೂ ಇಂಗ್ಲೀಷ್ ಪ್ರಮುಖವಾಗಿ, ಹಿಂದಿ ಆಗೊಮ್ಮೆಈಗೊಮ್ಮೆ. ಸಾಮಾನ್ಯವಾಗಿ, ಕನ್ನಡದಲ್ಲಿ ಬರೆದಾಗ, ಇಂಗ್ಲೀಷಿನಲ್ಲಿ ಅದನ್ನು ಭಾಷಾಂತರಿಸುವುದು  ಬ್ಲಾಗ್ನಲ್ಲಿ ರೂಢಿಸಿಕೊಂಡ ಅಭ್ಯಾಸ. ಈ ಬ್ಲಾಗ್ನಲ್ಲಿ ಇದನ್ನು   ಬಿಟ್ಟುಕೊಡುವ ಹುಮ್ಮಸ್ಸು ಕನ್ನಡ ರಾಜ್ಯೋತ್ಸವಕ್ಕೇ ಸೇರ ಬೇಕಾದ್ದು. 


 ಇವತ್ತು, ಇಂದಿನ ನಾಡು, ನುಡಿ ಹಾಗೂ ಕನ್ನಡಿಗರನ್ನು ಹೊಸ ದೃಷ್ಟಿಕೋನದಿಂದ ನೋಡುವ  ಒಂದು ಸಣ್ಣ ಪ್ರಯತ್ನ ಕೆಲವು ಹಾಡಿನೊಂದಿಗೆ. ಹಾಡುಗಳು ಆಯಾ ಕಾಲಘಟ್ಟಗಳನ್ನು ಪ್ರತಿಬಿಂಬಿಸುವವು.  ಇತಿಹಾಸದ ಪುಟಗಳೊಂದಿಗೆ ನಾಡಗೀತೆಗಳು ಬದಲಾಯಿತು. ’ಕಾಯೌ ಶ್ರೀ ಗೌರಿ’ ಹಿಂದಿನ ಮೈಸೂರು ಸಂಸ್ಠಾನವಾಗಿದ್ದಾಗಿನ ನಾಡಗೀತೆ. ಅದು ಅಂದಿನ ಕಾಲಮೌಲ್ಯಗಳನ್ನು ತೋರಿಸಿದರೆ, ಈಗಿನಕು.ವೆಂ.ಪು ರವರ ’ಜಯ ಭಾರತ ಜನನಿಯ ತನುಜಾತೆ’ ನವ ಭಾರತದ-ಪ್ರಜಾಪ್ರಭುತ್ವದ- ಸಾಮಾಜಿಕ ಮತ್ತು ರಾಜಕೀಯ ಬದಲಾವಣೆಗಳನ್ನು ತೋರಿಸುವುದು ಒಂದು ಮಜಲಾಗಿದ್ದರೆ, ಜಿ. ಪಿ. ರಾಜರತ್ನಂರವರ 'ತುತ್ತೂರಿ'  ಮಕ್ಕಳಿಗಾಗಿ ಬರೆದ ಕವನ ಸಂಕಲನ ಮಹತ್ವದ್ದು. ಇದರ ಜೊತೆಗೆ, ಹಾಸ್ಯ ಪ್ರಧಾನವಾದ ’ರತ್ನನ ಪದಗಳು’ ಭಾಷೆಯ ಅಭಿಮಾನದ ಜೊತೆಗೆ ಸರಳವಾದ ಆದರೆ ಸರಳೀಕೃತವಲ್ಲದ ಸೊಗಸಾದ ಪದ್ಯಗಳು. 

ಈ ಹೂತ್ತು ಕೇಳ ಬಯಸಿದರೆ, ಲಿಂಕ್ ಇಲ್ಲಿದೆ👇
  

https://www.youtube.com/watch?v=co1jIQvj_b8





https://www.youtube.com/watch?v=DAXMtd7ilas



ಹಾಗೆಯೇ, ಏನನ್ನದರೂ ಹೇಳ ಬಯಸಿದರೆ 👇


Please share your comments directly with me to rekhadatta02@gmail.com or message me @rekhadatta1 on Instagram. I shall send the links to you personally. Thanks for your patience.


2 comments:

  1. ಇಂಗ್ಲಿಷ್ ಮೇಡಮ್ಮು ಕನ್ನಡವನ್ನು ಅದರ ಪಾಡಿಗೆ ಬಿಡೋದು ಒಳ್ಳೆಯದು😃

    ReplyDelete
  2. This comment has been removed by a blog administrator.

    ReplyDelete